
21st August 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಪ್ಯಾಟಿ ಬಸವೇಶ್ವರ ನಾಟ್ಯ ಸಂಘ ಮತ್ತು ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಇವರ ಸಹಯೋಗದೊಂದಿಗೆ ನಾಳೆ ದಿನಾಂಕ 22-8-2025 ಶುಕ್ರವಾರದಂದು ಕಂಪನಿಯ ಸಹಾಯಾರ್ಥವಾಗಿ ಸಾಮಾಜಿಕ ನಾಟಕ ಆದರ್ಶ ಪ್ರೇಮ.
ಎರಡು ಪ್ರಯೋಗಗಳನ್ನು ಪ್ರದರ್ಶನ ಮಾಡಲಿದೆ. ಮದ್ಯಾನಃ 3-15 ಕ್ಕೆ ಹಾಗೂ ಸಂಜೆ 6-30 ಕ್ಕೆ ಎರಡು ಪ್ರಯೋಗಗಳು ಮಾತ್ರ ನಡೆಯಲಿದ್ದು ಬಸ್ ನಿಲ್ದಾಣದ ಪಕ್ಕದ ಹಸನಸಾಬ್ ದೋಟಿಹಾಳ ಅವರ ಜಾಗೆಯಲ್ಲಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದ ರಂಗ ಭೂಮಿಯಲ್ಲಿ ಇರುತ್ತದೆ.
ಕುಷ್ಟಗಿ ಪಟ್ಟಣದಲ್ಲಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಕಂಪನಿಯು ಕಳೆದ ಎರಡು ತಿಂಗಳ ಕಾಲ ಇಲ್ಲಿ ಬಂದಿದ್ದು ಮಳೆಯ ಹಿನ್ನೆಲೆಯಲ್ಲಿ ನಾಟಕ ವಿಕ್ಷಣೆಗೆ ಜನ ಬಾರದೆ ಪ್ರದರ್ಶನ ಸ್ಥಗಿತಗೊಳಿಸಿತ್ತು, ಇದರಿಂದಾಗಿ ಕಂಪನಿಯ ಸುಮಾರು ನಲವತ್ತು ಜನ ಕಲಾವಿದರನ್ನು ಸಲುಹುವದೆ ಕಷ್ಟವಾಗಿ ಕಂಪನಿ ಸಂಪೂರ್ಣ ನಷ್ಟ ಅನುಭವಿಸಿದೆ. ಕಾರಣ ಇಲ್ಲಿಂದ ಕಂಪನಿಯನ್ನು ಬೇರೆ ಕಡೆ ಸಾಗಿಸಲು ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಅವರಿಗೆ ಸಹಾಯ ಹಸ್ತ ನೀಡುವ ಸದುದ್ದೇಶದಿಂದಾ ಸಹಾಯಾರ್ಥವಾಗಿ ಸಾಮಾಜಿಕ ನಾಟಕ "ಆದರ್ಶ ಪ್ರೇಮ" ಎರ್ಪಡಿಸಲಾಗಿದೆ.
ಉದ್ಘಾಟನೆಯನ್ನು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ್, ಕಾಡಾ ಅಧ್ಯಕ್ಷರಾದ ಹಸನಸಾಬ್ ದೋಟಿಹಾಳ್
ಮಾಡಲಿದ್ದಾರೆ. ಸಾನಿದ್ಯವನ್ನು ರವಿಕುಮಾರ್ ಹಿರೇಮಠ ಅಜ್ಜನವರು ವಹಿಸಲಿದ್ದಾರೆ.
ತಾಲೂಕಿನ ಅಧಿಕಾರಿಗಳು ಮತ್ತು ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಈ ನಾಟಕದಲ್ಲಿ ಹಿರೇಮನ್ನಾಪೂರದ ಕಲಾವಿದರು ಮತ್ತು ಕಂಪನಿಯ ಕಲಾವಿದರು ಅಭಿನಯಿಸಿದ್ದಾರೆ. ಕಂಪನಿಯ ಸಹಾಯಾರ್ಥ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕ ವಿಕ್ಷಣೆ ಮಾಡುವ ಮೂಲಕ ಸಹಕರಿಸಬೇಕು ಎಂದು ವೀರಬಸಯ್ಯ ಕಾಡಗಿಮಠ,ಹಾಗೂ ಸೈಯದ್ ಮುರ್ತುಜಾ ,ರವಿಂದ್ರ ಬಾಕಳೆ ಕೊರಿದ್ದಾರೆ.
ಇದೇ ವೇಳೆ ಮಹಾದೇವಪ್ಪ ಬಡಿಗೇರ್, ದೇವಣ್ಣ ಬಳಿಗಾರ, ಶರಣಗೌಡ ಮಾ.ಪಾ. ಶಿವಾನಂದ ಹಿರೇಮಠ, ನಾಗಪ್ಪ ಹೊಸವಕ್ಕಲ್ NCH ಕಲ್ಯಾಣ ಮಂಟಪ ಕುಷ್ಟಗಿ, ಕಂಪನಿಯ ಮಾಲಿಕರಾದ ಪಂಚಾಕ್ಷರಿ ಹೂಗಾರ್, ಭಾರತಿ ದಾವಣಗೆರೆ, ಕಾಂಚನ ಕಲ್ಲೂರು, ಕುಮಾರ್ ಕಲ್ಲೂರು ಹಾಗೂ ಇತರರಿದ್ದರು.
ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.
ಆದರ್ಶ ಪ್ರೇಮ ಸಾಮಾಜಿಕ ನಾಟಕ, ನಾಳೆ
ಕೇವಲ ಎರಡು ಪ್ರಯೋಗಗಳು ಮಾತ್ರ ಪ್ರದರ್ಶನ
ಮದ್ಯಾನಃ 3-15 ಕ್ಕೆ ಹಾಗೂ ಸಂಜೆ 6-30 ಕ್ಕೆ ಎರಡು ಪ್ರಯೋಗಗಳು ಮಾತ್ರ ನಡೆಯಲಿದೆ.
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ
ಹರ್ ಘರ್ ತಿರಂಗಾ ಅಭಿಯಾನ ನಾಗರೀಕರಲ್ಲಿ ದೇಶಪ್ರೇಮ ಹೆಚ್ಚಿಸುತ್ತದೆ ; ಮಾಜಿ ಸೈನಿಕ ಬಿ.ಪ್ರಹ್ಲಾದ ರೆಡ್ಡಿ ಅಭಿಮತ